ಆರ್ಲಪದವು YK ಕಾಂಪ್ಲೆಕ್ಸ್‌ನಲ್ಲಿ ಕಾನಾ ಮೊಬೈಲ್ಸ್ “KANA MOBILE’S – Sales & Service Electronics” ಸ್ಥಳಾಂತರಗೊಂಡು ಶುಭಾರಂಭ
ಆರ್ಲಪದವು: ಪಾಣಾಜೆ ಗ್ರಾಮದ ಆರ್ಲಪದವಿನ ಮೇಲಿನ ಪೇಟೆಯಲ್ಲಿರುವ ವೈಕೆ ಕಾಂಪ್ಲೆಕ್ಸ್ ನಲ್ಲಿ ಕಾನಾ ಮೊಬೈಲ್ಸ್ ಸೇಲ್ಸ್ & ಸರ್ವಿಸ್ ಇಲೆಕ್ಟ್ರಾನಿಕ್ಸ್ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.ಮಳಿಗೆಯ ಮಾಲೀಕರಾದ ಇಹ್ಸಾನ್ ಕಾನ ಅವರ ತಂದೆ ಹಸನ್ ಶಾಫಿ ಕಾನ ರವರು ರಿಬ್ಬನ್ ಕತ್ತರಿಸುವುದರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ಸುಬೋಧ ಪ್ರೌಢಶಾಲೆಯ ಮುಖ್ಯಗುರು ನಿರ್ಮಲ, ಒಡ್ಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜನಾರ್ಧನ ಆಲ್ಚರ್, ಪಾಣಾಜೆ ಗ್ರಾ. ಪಂ ಮಾಜಿ ಸದಸ್ಯರುಗಳಾದ ಅಬೂಬಕ್ಕರ್ ಬೊಂಬೆ ಸ್ಟೋರ್, ನಾರಾಯಣ ನಾಯಕ್, ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಮುಹಮ್ಮದ್ ಕುಂಞ ಹಾಜಿ ಕಂಚಿಲ್ಕುಂಜ, ಕಟ್ಟಡ ಮಾಲೀಕ ಯಜ್ಞ ಕುಮಾರ್, ತಾಜರ್ ಖಾನ್ ಕಂಚಿಲ್ಕುಂಜ, ಪ್ರಸನ್ನ ಅಂತರ ಬೆಟ್ಟು, ಸ್ನೇಹಾ ಟೆಕ್ಸ್ ಟೈಲ್ ಮಾಲಕ ವರದರಾಯ ನಾಯಕ್, ಸಿ ಎ ಬ್ಯಾಂಕ್ ನಿರ್ದೇಶಕ ಹರೀಶ ಪೂಜಾರಿ, ಮೂಸಾ ಆರ್ಲಪದವು, ಇಸುಬು, ಅಬ್ದುಲ್ ಕುಂಞ ಮತ್ತಿತರರು ಉಪಸ್ಥಿತರಿದ್ದರು.
ಮಳಿಗೆಯ ಮಾಲಕ ಇಹ್ಸಾನ್ ಕಾನ ಮಾತನಾಡುತ್ತಾ ನಮ್ಮ ಈ ಮಳಿಗೆಯಲ್ಲಿ ವಿವಿಧ ಕಂಪನಿಗಳ ಮೊಬೈಲ್‌ಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಲಭ್ಯವಿದ್ದು, ಸೇಲ್ಸ್ ಮತ್ತು ಸರ್ವಿಸ್ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಭರವಸೆಯನ್ನು ವ್ಯಕ್ತಪಡಿಸಿ ಸರ್ವರನ್ನು ಸ್ವಾಗತಿಸಿದರು.