ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ SSF ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಮುಆಝ್ ಬಟ್ಟಪ್ಪಾಡಿ ನಿಧನ


ಮಂಗಳೂರು: ಉಳ್ಳಾಲ ಡಿವಿಷನ್‌ನ SSF ಕ್ಯಾಂಪಸ್ ಕಾರ್ಯದರ್ಶಿಯಾಗಿದ್ದ ಮುಆಝ್ ಬಟ್ಟಪ್ಪಾಡಿ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂಬ ದುಃಖದ ಸುದ್ದಿ ಹೊರಬಂದಿದೆ.

ತಮ್ಮ ದಿನಚರಿಯಲ್ಲಿ ತೊಡಗಿದ್ದ ವೇಳೆ ಮೊನ್ನೆ ಸಂಭವಿಸಿದ ಅಪಘಾತದಲ್ಲಿ ಮುಆಝ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

 ಆದರೆ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳದೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು  ಮೂಲಗಳು ತಿಳಿಸಿವೆ. ಎಸ್ ಎಸ್ ಎಫ್ ಸಕ್ರಿಯ ಕಾರ್ಯಕರ್ತನಾಗಿದ್ದ ಮುಆಝ್ ಅವರಾಗಳುವಿಕೆಯು ಕುಟುಂಬಕ್ಕೆ ಮತ್ತು ಸಂಘಟನೆ ಮತ್ತು ಅಪಾರ ಗೆಳೆಯರಿಗೆ ದುಃಖವನ್ನು ನೀಡಿದೆ 



`ಮರಣ ವಾರ್ತೆ`

إِنَّا لِلّهِ وَإِنَّـا إِلَيْهِ رَاجِعُون

SSF ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಮುಆಝ್ ಬಟ್ಟಪ್ಪಾಡಿ ಅಲ್ಲಾಹನ ರಹ್ಮತ್ ನೆಡೆಗೆ ಯಾತ್ರೆ ಯಾದರು.

_ಅಲ್ಲಾಹು ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಲಿ,ಅವರ ಪಾರತ್ರಿಕ ಜೀವನ ಅಲ್ಲಾಹನು ಸಂತೊಷ ಗೊಳಿಸಲಿ.

SSF KARNTAKA
Students Center RT Nagar Bengaluru.

Next Post Previous Post