ಶಬರಿಮಲೆ; ಚಿನ್ನ ಹಗರಣದ ಬಳಿಕ ತುಪ್ಪದ ಹಗರಣ: ವಿಜಿಲೆನ್ಸ್ ತನಿಖೆಗೆ ಹೈಕೋರ್ಟ್ ಆದೇಶ


ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ‘ಆದಿಯಾ ಶಿಷ್ಟಂ ತುಪ್ಪ’ ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಕೇರಳ ಹೈಕೋರ್ಟ್ ಉನ್ನತ ಮಟ್ಟದ ವಿಜಿಲೆನ್ಸ್ ತನಿಖೆ ಕಡ್ಡಾಯಗೊಳಿಸಿ ಆದೇಶ ನೀಡಿದೆ.


ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನೌಕರರ ದುಷ್ಕೃತ್ಯದ ಬಗ್ಗೆ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಆಘಾತ ವ್ಯಕ್ತಪಡಿಸಿ, ವ್ಯವಸ್ಥಿತ ವೈಫಲ್ಯಗಳು ಮತ್ತು ಸಂಭಾವ್ಯ ಸಂಘರ್ಷಗಳನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡುವಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶನ ನೀಡಿದ್ದಾರೆ.

ಟಿಡಿಬಿ ಮುಖ್ಯ ವಿಜಿಲೆನ್ಸ್ ವರದಿಯು 16,628 ಪ್ಯಾಕೆಟ್ ತುಪ್ಪವನ್ನು ಆದಾಯ ವಿವರನ್ನು ಕಳುಹಿಸದೆ ಮಾರಾಟ ಮಾಡಿರುವುದನ್ನು ಬಹಿರಂಗಪಡಿಸಿದೆ. ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 35 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸದೆ ಉಳಿಸಿಕೊಂಡಿರುವುದನ್ನು ನ್ಯಾಯಾಲಯವು ಗಂಭೀರ ಕ್ರಿಮಿನಲ್ ಉಲ್ಲಂಘನೆ ಎಂದು ಪರಿಗಣಿಸಿದೆ.
Next Post Previous Post