1986 ಪ್ರಕರಣದಲ್ಲಿ 39 ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಶಕೂರ್ ಅವರಿಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು
ಮಂಗಳೂರು: ಸುಮಾರು 39 ವರ್ಷಗಳಿಂದ ಪರಾರಿಯಾಗಿದ್ದ ಆರೋಪಿಗೆ ಮಂಗಳೂರಿನ ಗೌರವಾನ್ವಿತ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಯಾಗಲು ಆದೇಶ ನೀಡಿದೆ.
1986 ರ LPC ಪ್ರಕರಣದಲ್ಲಿ ಆರೋಪಿ ಶಕೂರ್ ತಲೆಮರಿಸಿಕೊಂಡಿದ್ದು,ಅವರನ್ನು ಬಜಪೆ ಪೊಲೀಸ್ ಸ್ಟೇಷನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು
01-12-2025 ರಂದು ನಡೆದ ವಿಚಾರಣೆಯಲ್ಲಿ,ಗೌರವಾನ್ವಿತ ಮಂಗಳೂರು ನ್ಯಾಯಾಲಯವು ದೀರ್ಘ ಕಾಲ ವಿಚಾರಣೆ ನಡೆಸಿ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ
ಅಡ್ವೊಕೇಟ್ ಉಮರುಲ್ ಫಾರೂಕ್ ನೆಲ್ಯಾಡಿ ಮತ್ತು ಅಡ್ವೊಕೇಟ್ ಮುಂಜೀರ್ ತುಂಬೆ ಮತ್ತು ಅಶ್ಫಾಕ್ ಬೋಳಿಯಾರ್ ರವರು ವಾದ ಮಂಡಿಸಿದರು.