ಬ್ಯಾರಿ ಅಕಾಡೆಮಿಯ ಚಮ್ಮನ ಬ್ಯಾರಿ ವಿದ್ಯಾರ್ಥಿ ಸಂಗಮ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ
ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಡಿ.7ರಂದು ಪುತ್ತೂರು ಪುರಭವನದಲ್ಲಿ ನಡೆಯಲಿರುವ ಬ್ಯಾರಿ ಅಕಾಡೆಮಿಯ ಚಮ್ಮನ (ಗೌರವ ಪುರಸ್ಕಾರ) ಪ್ರಧಾನ ಮತ್ತು ಬ್ಯಾರಿ ವಿದ್ಯಾರ್ಥಿ ಸಂಗಮ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಡಿ.3ರಂದು ಬೊಳುವಾರಿನಲ್ಲಿರುವ ಆಕರ್ಷಣ್ ಬಿಲ್ಡರ್ಸ್ ಕಚೇರಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ ಪಿ ಅಹಮದ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಅಧ್ಯಕ್ಷರಾದ ಉಮರ್ ಯು ಎಚ್ ರವರ ಉಪಸ್ಥಿತಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಸಂಚಾಲಕರಾದ ಡಾ.ಹಾಜಿ. ಎಸ್.ಅಬೂಬಕರ್ ಆರ್ಲಪದವು,ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಉಪಾಧ್ಯಕ್ಷರುಗಳಾದ ಅಬ್ದುಲ್ ರಹಿಮಾನ್ ಹಾಜಿ ಆಜಾದ್, ಇಬ್ರಾಹಿಂ ಗೋಳಿಕಟ್ಟೆ,ಕಾರ್ಯದರ್ಶಿಗಳಾದ ವಿ ಕೆ ಶೆರೀಫ್ ಬಪ್ಪಳಿಗೆ ಮತ್ತು ಅಬ್ದುಲ್ ಹಮೀದ್ ಸೋಂಪಾಡಿ,
ಸಂಘಟನಾ ಕಾರ್ಯದರ್ಶಿಗಳಾದ ನ್ಯಾಯವಾದಿ ಕೆ ಎಂ ಸಿದ್ದೀಕ್ ಹಾಜಿ, ಹಾಜಿ ಅಶ್ರಫ್ ಕಲ್ಲೆಗ, ಉಮ್ಮರ್ ಕರಾವಳಿ, ಪತ್ರಿಕಾ ಕಾರ್ಯದರ್ಶಿ ಶೇಕ್ ಜೈನುದ್ದೀನ್, ಸದಸ್ಯರಾದ ಟಿ ಮುಹಮ್ಮದ್ ತೆಂಕಿಲ ಉಪಸ್ಥಿತರಿದ್ದರು