ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿಗೆ ರಾಜ್ಯ ಪತ್ರಕರ್ತರ ಸಂಘದ 2025ರ ಮಂಗಳ ವರ್ಗೀಸ್ ಸ್ಮಾರಕ ರಾಜ್ಯ ಪ್ರಶಸ್ತಿ.


ಪುತ್ತೂರು: ನಿವೃತ್ತ ಪದವೀಧರ ಶಿಕ್ಷಕ, ಶಿಕ್ಷಣದಲ್ಲಿ ಹಿರಿಮೆಗೆ ರಾಜ್ಯ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರು, ಸುದ್ದಿ ಬಿಡುಗಡೆಯ ಪ್ರತಿಭಾರಂಗ ಅಂಕಣಕಾರರು,ದ.ಕ.ಜೇನುವ್ಯವಸಾಯಗಾರರ ಸಹಕಾರಿ ಸಂಘ ಪ್ರಕಟಿತ ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಯವರಿಗೆ,2025ರ ,ಅಂಕಣ ಲೇಖನ ಬರಹಕ್ಕಾಗಿ, ರಾಜ್ಯ ಪತ್ರಕರ್ತರ ಸಂಘದ,ಮಂಗಳ ವರ್ಗೀಸ್ ಸ್ಮಾರಕ ರಾಜ್ಯ ಪ್ರಶಸ್ತಿ ಕಳೆದ ಜನವರಿಯಲ್ಲಿ ಪ್ರಕಟವಾಗಿದ್ದು,


ಇದೇ ಡಿ:9 ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪ್ರದಾನ ಮಾಡಲಾಗುವು ದೆಂದು, ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು ವಾರ್ತಾಭಾರತಿಯ ಹಿರಿಯ ಪತ್ರಕರ್ತ ಪುಷ್ಪರಾಜ್ ಬಿ.ಎನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Next Post Previous Post