BREAKING: ಶಾಲೆ-ಕಾಲೇಜುಗಳಿಗೆ ರಜೆ.!! ವೈರಲ್ ಆದೇಶ ನಕಲಿ; ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ


ಮಂಗಳೂರು, ಆ.2: ಭಾರೀ ಮಳೆಯ ಹಿನ್ನೆಲೆಯಲ್ಲಿ ಆ.3ರ ಸೋಮವಾರ ಶಾಲೆ ಮತ್ತು ದ್ವಿತೀಯ ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿಯ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ರಜೆಯ ಬಗ್ಗೆ ನಕಲಿ ಆದೇಶಗಳು ಹಂಚಿಕೆಯಾಗುತ್ತಿದೆ. ವಿಪತ್ತು ಅಥವಾ ರಜೆಯ ಬಗ್ಗೆ ಗೊಂದಲ ಮೂಡಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54ರ ಪ್ರಕಾರ ವಿಪತ್ತು ಅಥವಾ ಅದರ ತೀವ್ರತೆ ಅಥವಾ ವ್ಯಾಪ್ತಿಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿ ಅಥವಾ ಹರಡಿ ಭಯಭೀತಿಯನ್ನು ಉಂಟುಮಾಡುವ ವ್ಯಕ್ತಿಯು ತಪ್ಪಿತಸ್ಥರೆಂದು ಸಾಬೀತಾದಲ್ಲಿ, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಅಥವಾ ದಂಡದ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
Next Post Previous Post