Popular Posts

ಜನಸಾಮಾನ್ಯರ ಸ್ಪಂದನೆಯ ಮತ್ತೊಂದು ಹೆಸರು - ಲಿಬ್ಜೆತ್ ✍️ Ashir Kunthoor


ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಆಪ್ತ ಸಹಾಯಕರಾಗಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆ, ಕಾಳಜಿ ಮತ್ತು ಮಾನವೀಯತೆಯಿಂದ ನಿರ್ವಹಿಸುತ್ತಿರುವ ಲಿಬ್ಜೆತ್ ಅವರು ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಮತ್ತೊಂದು ಹೆಸರಾಗಿದ್ದಾರೆ.

ಸಾಮಾನ್ಯವಾಗಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರನ್ನು ಸಂಪರ್ಕಿಸುವುದು ಸುಲಭವಲ್ಲ. ಆದರೆ, ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ದರೂ, ಎಷ್ಟೇ ತಡರಾತ್ರಿಯಾಗಿದ್ದರೂ ಜನರ ಕರೆಯನ್ನು ಸ್ವೀಕರಿಸಿ, ಅವರ ಸಮಸ್ಯೆಯನ್ನು ಆಲಿಸಿ, ಸಾಧ್ಯವಾದಷ್ಟು ತಕ್ಷಣ ಸ್ಪಂದಿಸುವ ಗುಣ ಲಿಬ್ಜೆತ್ ಅವರ ವಿಶೇಷ ವ್ಯಕ್ತಿತ್ವವಾಗಿದೆ.

ವಿಶೇಷವಾಗಿ ವಿದ್ಯಾರ್ಥಿಗಳ ಸಮಸ್ಯೆಯಾಗಲಿ, ಕಾಲೇಜಿನ ಸಮಸ್ಯೆಯಾಗಲಿ, ಹಾಸ್ಟೆಲ್‌ಗೆ ಸಂಬಂಧಿಸಿದ ವಿಚಾರವಾಗಲಿ ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಾರ್ವಜನಿಕ ಸಮಸ್ಯೆಯಾಗಲಿ — ನೇರವಾಗಿ ಕರೆ ಮಾಡಿದಾಗ ಅದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರೊಂದಿಗೆ ಮಾತನಾಡಿ ಪರಿಹಾರದ ದಾರಿ ತೋರಿಸುವ ಅವರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ.

*ಈ ರೀತಿ ಮಾಡಿ… ಈ ವಿಚಾರವನ್ನು ನೋಡಿಕೊಳ್ಳುತ್ತೇವೆ… ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇವೆ”* ಎಂಬ ಭರವಸೆಯ ಮಾತುಗಳ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ವ್ಯಕ್ತಿತ್ವ ಅವರದ್ದು.

ಹುದ್ದೆ ಎಂಬುದು ಕೇವಲ ಅಧಿಕಾರವನ್ನು ನೀಡುವುದಲ್ಲ; ಜನರ ಸಮಸ್ಯೆಯನ್ನು ತನ್ನ ಸಮಸ್ಯೆಯೆಂದು ಭಾವಿಸಿ, ಅವರಿಗೆ ಸಮಯ ನೀಡುವುದು ಮತ್ತು ಸ್ಪಂದಿಸುವುದೇ ನಿಜವಾದ ಜನಸೇವೆ. ಈ ಗುಣವನ್ನು ತಮ್ಮ ಕಾರ್ಯವೈಖರಿಯಲ್ಲಿ ಅಳವಡಿಸಿಕೊಂಡಿರುವ ಲಿಬ್ಜೆತ್ ಅವರ ಸೇವೆ ನಿಜಕ್ಕೂ ಅಭಿನಂದನಾರ್ಹ.

ಜನಸಾಮಾನ್ಯರ ಧ್ವನಿಗೆ ಸ್ಪಂದಿಸುವ ನಿಮ್ಮ ಈ ಸೇವಾ ಮನೋಭಾವ ಹೀಗೆಯೇ ಮುಂದುವರಿಯಲಿ. ಇನ್ನಷ್ಟು ಜನರಿಗೆ ನೆರವಾಗುವ ಶಕ್ತಿ, ಸಮಯ ಮತ್ತು ಅವಕಾಶವನ್ನು ಭಗವಂತ ನಿಮಗೆ ಕರುಣಿಸಲಿ.

*ಸಾಮಾಜಿಕ ಸೇವೆಯ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲು ದೇವರು ಅನುಗ್ರಹಿಸಲಿ. ನಿಮಗೆ ಉತ್ತಮ ಆರೋಗ್ಯ, ದೀರ್ಘಾಯಸ್ಸು, ನೆಮ್ಮದಿ ಹಾಗೂ ಯಶಸ್ಸನ್ನು ನೀಡಿ ಸದಾ ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.*

*ಜನರಿಗಾಗಿ ಸದಾ ತೆರೆದಿರುವ ನಿಮ್ಮ ಹೃದಯಕ್ಕೂ, ಪ್ರತಿಯೊಂದು ಕರೆಗೆ ಸ್ಪಂದಿಸುವ ನಿಮ್ಮ ಮಾನವೀಯತೆಗೂ ಹೃತ್ಪೂರ್ವಕ ಅಭಿನಂದನೆಗಳು.*
Next Post Previous Post