ಪುತ್ತೂರು ಶಾಸಕರ ಭವನದಲ್ಲಿ ಎಸ್ಐಆರ್ ಬಗ್ಗೆ ಮಾಹಿತಿ ಕಾರ್ಯಾಗಾರ


ಪುತ್ತೂರು: ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಶಾಸಕರ ಸೂಚನೆ ಮೇರೆಗೆ ಅತ್ಯಂತ ಉಪಯುಕ್ತವಾದ ಎಸ್ಐಆರ್ ಕುರಿತು ಅಂತಿಮ ತರಬೇತಿ ಪರಿಷ್ಕರಣೆ ಬಗ್ಗೆ ಪುತ್ತೂರು ಬ್ಲಾಕ್ ವ್ಯಾಪ್ತಿಯ ಪ್ರತಿ ವಲಯದಿಂದ ಗೈರು ಹಾಜರಾದ ವಲಯ ಅಧ್ಯಕ್ಷರು ಬೂತ್ ಅಧ್ಯಕ್ಷರು ಬಿ ಎಲ್ ಎ ಗಳಿಗೆ ಮಾಹಿತಿ ಕಾರ್ಯಗಾರವು ಜುಲೈ ಒಂದರಂದು ಪುತ್ತೂರು ಶಾಸಕರ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರಗಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. 



ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ತರಬೇತುದಾರರಾದ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ಮತ್ತು ಸಂತೋಷ್ ಭಂಡಾರಿ ಚಿಲ್ಮೆತ್ತಾರು ಇವರು ಎಸ್ಐಆರ್ ವ್ಯವಸ್ಥೆಯ ಮಹತ್ವ ಅದರ ಕಾರ್ಯವೈಖರಿ ಹಾಗೂ ಮತದಾರರು ಇದರ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ಸಮಗ್ರ ಮತ್ತು ಸವಿಸ್ತಾರವಾದ ಮಾಹಿತಿಯನ್ನು ಮನವರಿಕೆ ಮಾಡಿಕೊಟ್ಟರು ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ, ಪುಡಾದ ಅಧ್ಯಕ್ಷ ಅಮಲ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. 




ಸಮಾರಂಭದಲ್ಲಿ ವಸಂತ ಕುಮಾರ್ ರೈ, ಪ್ರಮೋದ್ ಕೆ ಪೆರ್ಲಂಪಾಡಿ, ಮೋನು ಬಪ್ಪಳಿಗೆ, ಆನಂದ ಕಲಾಯಿ, ಕಮಲೇಶ್ , ಅಬೂಬಕ್ಕಲ್ ಕೊರಿಂಗಿಲ, ಅಶೋಕ್ ಪೂಜಾರಿ, ಶೀನಪ್ಪ ನಾಯ್ಕ ಚೆನ್ನ ಕುಂಬ್ರ, ಮಾಧವ, ಸಲ್ಮಾ , ಸೋಮಪ್ಪ ಪೂಜಾರಿ, ಪವನ್, ಕವಿತಾ ಕೆ ರೈ , ಹ್ಯಾರೀಶ್ ಎಸ್, ಲೋಕೇಶ್ ರೈ , ಕಲಾವತಿ ಎಸ್ ಗೌಡ , ಕೆ ಇಬ್ರಾಹಿಂ ಹಾಜಿ , ಶ್ರೀಮತಿ ಕೆ, ಧರ್ಮೇಂದ್ರ ಕುಲಾಲ್, ಯಾಕೂಬ್ ಕೂಟತ್ತಾನ, ಇಸ್ಮಾಯಿಲ್ ಹಾಜಿ ಕೂಟತ್ತಾನ, ಮೊಹಮ್ಮದ್ ಅಲಿ , ಐತಪ್ಪ ಪೇರಲ್ತಡ್ಕ, ವಿಜಯ ಧೂಮಡ್ಕ , ಮೊಯಿದು ಕುಂಞ ರೆಂಜ, ರಾಮ ನಾಯ್ಕ ಪಾಣಾಜೆ,ದಾಮೋದರ ಉಪ್ಪಳಿಗೆ , ರವಿರಾಜ್ ರೈ, ಮಹಾಲಿಂಗ , ಬಶೀರ್ ಪರ್ಲಡ್ಕ ಗಂಗಾಧರ , ರಂಜಿತ್, ಮತ್ತಿತರರು ಉಪಸ್ಥಿತರಿದ್ದು ಇದರ ಸದುಪಯೋಗವನ್ನು ಪಡೆದುಕೊಂಡರು
Next Post Previous Post