ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ರವರಿಗೆ ಮತ್ತು ರೋಹಿಣಿ ರಾಘವ ಆಚಾರ್ಯ ರವರಿಗೆ ಸನ್ಮಾನ
ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ, ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಮತ್ತು ಆರ್ಯಭಟ ಪ್ರಶಸ್ತಿ ವಿಜೇತ ಕೇಂದ್ರದ ಉಪಾಧ್ಯಕ್ಷರಾದ ರೋಹಿಣಿ ರಾಘವ ಆಚಾರ್ಯ ಇವರಿಗೆ ಗೌರವ ಸನ್ಮಾನವನ್ನು ನೀಡಲಾಯಿತು.
ಸಮಾರಂಭವು ಪುತ್ತೂರು ನಗರದಲ್ಲಿರುವ ರೋಹಿಣಿ ಹೊಲಿಗೆ ಕೇಂದ್ರದ ಕಚೇರಿಯಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆ ಇವರ ಅಧ್ಯಕ್ಷತೆಯಲ್ಲಿ ಜರಗಿತು ಈ ಸಂದರ್ಭದಲ್ಲಿ ಕೋಶಾಧಿಕಾರಿ ವತ್ಸಲಾ ನಾಯಕ್ ಒಕ್ಕೂಟದ ಮಾಜಿ ಅಧ್ಯಕ್ಷೆ ನಯನ ರೈ ಸದಸ್ಯರಾದ ಪ್ರೇಮಲತಾ , ರತ್ನ ನಾಯರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುಮಂಗಳ ಶೆಣೈ ಸ್ವಾಗತಿಸಿ ರೋಹಿಣಿ ರಾಘವ ಆಚಾರ್ಯ ವಂದಿಸಿದರು