ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ಒದಗಿಸಲು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಗ್ರಹ


ಪುತ್ತೂರು: ಸರಕಾರ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳ ಕುರಿತು ತುಂಬಾ ಕಾಳಜಿ ವಹಿಸುತ್ತಿರುವುದು ಅಭಿನಂದನೆನೀಯ ಹಾಗೂ ಶ್ಲಾಘನೀಯ. ಆದರೆ ಮಕ್ಕಳ ಕಲಿಕೆ ಬೇಕಾಗುವ ಮೂಲಭೂತ ವ್ಯವಸ್ಥೆಗಳಲ್ಲೊಂದಾದ ಪಠ್ಯಪುಸ್ತಕಗಳು ಸಮಯಕ್ಕೆ ಸರಿಯಾಗಿ ಬರದೇ ಇರುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ಹಾಗೂ ಶಿಕ್ಷಕರಿಗೆ ಕಬ್ಬಿಣದ ಕಡಲೆಕಾಯಿಯಂತಾಗಿದೆ.

ಪ್ರತೀ ವರ್ಷ ಪಠ್ಯ ಪುಸ್ತಕಗಳು ಸಮವಸ್ತ್ರ ಮೇ ತಿಂಗಳ 15 ರೊಳಗೆ ಆಯಾ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಶಾಲಾ ಕಾಲೇಜುಗಳು ಪ್ರಾರಂಭವಾದ ಮೇಲೂ ಪುಸ್ತಕಗಳು ಮುದ್ರಣ ಗೊಳ್ಳುತ್ತಿಲ್ಲ ಎಂದ ಮೇಲೆ ಶಾಲಾ ಶಿಕ್ಷಣದ ವ್ಯವಸ್ಥೆ ಏನಾಗಬಹುದು. ಶಾಲಾ ಪಠ್ಯಪುಸ್ತಕಗಳ ಮುದ್ರಣವನ್ನು ಮಾಡುವ ಸಮಿತಿಗಳಿರಬಹುದು ಗುತ್ತಿಗೆದಾರರಿರಬಹುದು. ಇವರಿಗೆ ಸೂಕ್ತ ಎಚ್ಚರಿಕೆಯನ್ನು ನೀಡಿ ಆಯಾ ಶಾಲೆಗೆ ಸಮಯಕ್ಕೆ ಸರಿಯಾಗಿ ಪುಸ್ತಕ ತಲುಪಿಸುವಂತೆ ಮಾಡಬೇಕಾದ ಅನಿವಾರ್ಯತೆ ಇದೆ.

 ಸೋಲಾಪುರದಲ್ಲಿ ನಡೆದ ಹೊರನಾಡ ಮಹಾ ಮೇಳದಲ್ಲು ಹೊರನಾಡಿನಲ್ಲಿ ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕ ಪರಿಕರಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಕೂಗೂ ಕೇಳಿ ಬಂದಿತ್ತು ಈ ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗಿ ಸುಮಾರು ದಿವಸಗಳು ಸಂದರೂ ಪಠ್ಯಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಿತಪಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ ಆದುದರಿಂದ ರಾಜ್ಯದ ಮತ್ತು ಹೊರನಾಡ ಕನ್ನಡದ ಶಾಲಾ ಕಾಲೇಜುಗಳಿಗೆ ಶಿಕ್ಷಣದ ಪ್ರಥಮ ಮೂಲಭೂತ ಹಕ್ಕಿನಲ್ಲೊಂದಾದ ಪಠ್ಯ ಪುಸ್ತಕಗಳನ್ನು ಶೀಘ್ರವೇ ಶಾಲಾ ಕಾಲೇಜುಗಳಿಗೆ ತಲುಪಿಸಿ ಕೊಡುವಂತೆ ಗಡಿನಾಡ ಶ್ರೇಯೋಭಿವೃಧ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಸರಕಾರವನ್ನು ಒತ್ತಾಯಿಸಿದ್ದಾರೆ
Next Post Previous Post