ಜೂನ್ 28ಕ್ಕೆ ಪಾಣಾಜೆಯಲ್ಲಿ ರೆಂಜ ಸೆಕ್ಟರ್ ಸಾಹಿತ್ಯೋತ್ಸವ ಆರ್ಲಪದವಿನಲ್ಲಿ ಪೂರ್ವಭಾವಿ ಸಭೆ | ಸ್ಥಳೀಯ ಸ್ವಾಗತ ಸಮಿತಿ ಛಯರ್ಮ್ಯಾನ್ ಆಗಿ ಎ ಎಸ್ ಆರ್ ಮುಹಮ್ಮದ್ ಕುಂಞ ,ಕನ್ವೀನರ್ ಆಗಿ ಸಂಶುದ್ಧೀನ್ ಜಾಲಗದ್ದೆ, ಕೋಶಾಧಿಕಾರಿ ಯಾಗಿ ಹಸ್ಸನ್ ಉಡ್ಡಂಗಳ
ಪುತ್ತೂರು: ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶಾದ್ಯಂತ ನಡೆಸಲ್ಪಡುವ ಸಾಹಿತ್ಯ ಹಬ್ಬವಾದ ಎಸ್ ಎಸ್ ಎಫ್ ಸಾಹಿತ್ಯೋತ್ಸವವು ಎಸ್ ಎಸ್ ಎಫ್ ರೆಂಜ ಸೆಕ್ಟರ್ ಸಾಹಿತ್ಯೋತ್ಸವ ಜೂನ್ 28 ರಂದು ಪಾಣಾಜೆ ವಿವೇಕ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು ಸ್ಥಳೀಯ ಸ್ವಾಗತ ಸಮಿತಿ ಹಾಗೂ ಸಾಹಿತ್ಯೋತ್ಸವದ ಪೂರ್ವಭಾವಿ ಸಭೆಯು ರೆಂಜ ಸೆಕ್ಟರ್ ಸ್ವಾಗತ ಸಮಿತಿ ಛಯರ್ಮ್ಯಾನ್ ಮೂಸ ಕುಂಞ ಕೀಲಂಪಾಡಿ ಇವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಗೌರವ ಸಲಹೆಗಾರರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಇವರ ನಿವಾಸದಲ್ಲಿ ಜರಗಿತು.
ಸ್ಥಳೀಯ ಸ್ವಾಗತ ಸಮಿತಿ ಚೇರ್ಮನ್ ಆಗಿ ಎ ಎಸ್ ಆರ್ ಮುಹಮ್ಮದ್ ಕುಂಞ, ಕನ್ವೀನರಾಗಿ ಸಂಸುದ್ದೀನ್ ಜಾಲಗದ್ದೆ, ಕೋಶಾಧಿಕಾರಿಯಾಗಿ ಹಸನ್ ಉಡ್ಡಂಗಳ , ವೈಸ್ ಛಯರ್ಮ್ಯಾನ್ ಗಳಾಗಿ ಬಶೀರ್ ಮುಸ್ಲಿಯಾರ್ ಮತ್ತು ಮೂಸಾ ಟಿಂಬರ್ ಆರ್ಲಪದವು , ವೈಸ್ ಕನ್ವೀನರ್ ಗಳಾಗಿ ಶಾಫಿ ಕಾನ ಮತ್ತು ಸಲೀಂ ತೋಡುಬಳಿ, ಎಕ್ಸಿಕ್ಯೂಟಿವ್ ಸದಸ್ಯರುಗಳಾಗಿ ರಝಾಕ್ ಬದ್ರಿಯಾ, ಎ ಎಸ್ ಅಬೂಬಕರ್, ಶರೀಫ್ ಕಡಮಾಜೆ , ಜೆ ಯಸ್ ಇಸ್ಮಾಯಿಲ್ , ಸಿಂಸಾರುಲ್ ಹಕ್ ಆರ್ಲಪದವು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಾಹಿತ್ಯೋತ್ಸವವನ್ನು ಸೆಕ್ಟರ್ ನ ಎಲ್ಲಾ ಯುನಿಟ್ ಗಳು ಸೇರಿ ಯಶಸ್ಸು ಗೊಳಿಸಲು ತೀರ್ಮಾನಿಸಲಾಯಿತು ಸ್ವಾಗತ ಸಮಿತಿ ಸಲಹೆಗಾರರಾದ ಲತೀಫ್ ಮುಸ್ಲಿಯಾರ್ ದುಆ ನೆರವೇರಿಸಿದರು. ಸೆಕ್ಟರ್ ಕನ್ವೀನರ್ ರಫೀಕ್ ಬಾಅಹ್ ಸನಿ ಸ್ವಾಗತಿಸಿದರು. ವೈಸ್ ಕನ್ವೀನರ್ ರಜಾಕ್ ಹಿಮಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಸಲಹೆಗಾರರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಹಿಮಮಿ ಸಖಾಫಿ ವೈಸ್ ಛಯರ್ಮ್ಯಾನ್ ಅಬ್ದುಲ್ ರಹಿಮಾನ್ ಕೈಕಾರ , ಕೋಶಾಧಿಕಾರಿ ಎಂ ಕೆ ಸಂಶುದ್ದೀನ್ , ತಾಜರ್ ಖಾನ್ ಕಂಚಿಲ್ ಕುಂಜ, ವೈಸ್ ಕನ್ವೀನರ್ ಕೆರೀಂ ಬಾಅಹ್ ಸನಿ, ಕಾರ್ಯಕ್ರಮ ಸಮಿತಿ ಚಯರ್ಮ್ಯಾನ್ ಖಲಂದರ್ ಹಿಮಮಿ ಸಖಾಫಿ ಕನ್ವೀನರ್ ರಿಫಾಹಿ ಹಾಶಿಮಿ, ಕೋಶಾಧಿಕಾರಿ ಹಾಮಿದ್ ಅಲಿ ಹಿಮಮಿ ಸಖಾಫಿ , ಉಸ್ಮಾನ್ ಯಾನೆ ಅಚ್ಚು ಅಲ್ ಐನ್ ಮತ್ತಿತರರು ಉಪಸ್ಥಿತರಿದ್ದರು.