ನಿಡ್ಪಳ್ಳಿ ವಲಯ ಕಾಂಗ್ರೆಸ್ ಸಮಿತಿ ಸಭೆ
ಪುತ್ತೂರು: ತಾಲೂಕು ನಿಡ್ಪಳ್ಳಿ ವಲಯ ಕಾಂಗ್ರೆಸ್ ಸಮಿತಿ ಸಭೆಯು ವಲಯಾಧ್ಯಕ್ಷರಾದ ಹರೀಶ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಸಾಮಾಜಿಕ ಜಾಲತಾಣದ ಸುಪ್ರೀತ್ ಕಣ್ಣಾರಾಯ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರೂ ನಿಡ್ಪಳ್ಳಿ ವಲಯ ಸಮಿತಿಯ ಉಸ್ತುವಾರಿ ಡಾ.ಹಾಜಿ.ಯಸ್. ಅಬೂಬಕರ್ ಆರ್ಲಪದವು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಸಿಫ್ ಹಾಜಿ ತಂಬುತ್ತಡ್ಕ ಮುಖಂಡರಾದ ಗಂಗಾಧರ ಶೆಟ್ಟಿ, ಸತೀಶ್ ರೈ ಭಾಸ್ಕರ ಕರ್ಕೇರ, ಅವಿನಾಶ್ ರೈ ಕುಡ್ಚಿಲ, ತಾರನಾಥ , ಸತೀಶ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಬಗ್ಗೆ ಸಾಮಾಜಿಕ ಜಾಲತಾಣವನ್ನು ಬಲಿಷ್ಠ ಗೊಳಿಸುವ ಬಗ್ಗೆ ಕೆಪಿಎಸ್ಸಿ ಶಾಲೆಯನ್ನು ಬೆಟ್ಟಂಪಾಡಿಯಲ್ಲಿ ಯಾ ನಿಡ್ಪಳ್ಳಿ ಪ್ರಾರಂಭಿಸಲು ಶಾಸಕರಿಗೆ ಮನವಿ ಸಲ್ಲಿಸುವ ಕುರಿತು , ಮತದಾರರ ಮ್ಯಾಪಿಂಗ್ ಕಾರ್ಯದಲ್ಲಿ ಬಿಎಲ್ ಒ ಗಳಿಂದ ಸಮರ್ಪಕವಾದ ಸಹಕಾರ ದೊರಕುವುದಿಲ್ಲ ಎಂಬುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗಳು ಉಂಟಾಯಿತು. ಸುಮಾರು 4 ಕೋಟಿಗಿಂತಲೂ ಹೆಚ್ಚಿನ ಅನುದಾನಗಳು ನಿಡ್ಪಳ್ಳಿ ವಲಯಕ್ಕೆ ಮಾನ್ಯ ಶಾಸಕರ ನೇತೃತ್ವದಲ್ಲಿ ಮಂಜೂರಾಗಿರುವ ಕುರಿತು ಸಭೆಯಲ್ಲಿ ಸಂತಸ ವ್ಯಕ್ತಪಡಿಸುವುದರೊಂದಿಗೆ ಶೀಘ್ರವಾಗಿ ಶಾಸಕರ ದಿನ ನಿಗದಿಯನ್ನು ಮಾಡಿ ಶಂಕು ಸ್ಥಾಪನೆಗಳನ್ನು ಮಾಡುವುದೆಂದು ಅಭಿಪ್ರಾಯಿಸಲಾಯಿತು.ವಲಯಾಧ್ಯಕ್ಷರಾದ ಹರೀಶ್ ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.