ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಫಾದರ್ ಪತ್ರಾವೋ ಆಸ್ಪತ್ರೆ, ಪುತ್ತೂರು ಇವರಿಂದ ಆರೋಗ್ಯ ಮತ್ತು ಸುರಕ್ಷತಾ ಜಾಗೃತಿ ಕಾರ್ಯಕ್ರಮ
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಮತ್ತು ಫಾ. ಪತ್ರಾವೋ ಆಸ್ಪತ್ರೆ, ದರ್ಬೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಆರೋಗ್ಯ ಮತ್ತು ಸುರಕ್ಷತೆ ಮಾಹಿತಿ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಿಂಗಳಾಡಿ ಇಲ್ಲಿ 02-12-2025 ರಂದು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಎನ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಸಿಸ್ಟರ್ ಜ್ವಾನಾ ತೇಜಸ್ವಿ ಸಿಕ್ವೇರಾ (MBBS, MS) ಭಾಗವಹಿಸಿ ಆರೋಗ್ಯ ಸಂರಕ್ಷಣೆಯ ಮಹತ್ವ, ಶಿಸ್ತುಪೂರ್ಣ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ, ಮತ್ತು ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಹೇಗೆ ಬೆಳೆಸಬೇಕೆಂಬ ವಿಷಯಗಳ ಕುರಿತು ಮಹತ್ವದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅತಿಥಿಗಳಾಗಿ SDMC ಅಧ್ಯಕ್ಷರಾದ ಹಮೀದ್ ಟಿಎಂ, ಮುಖ್ಯಶಿಕ್ಷಕಿ ವಿಜಯ ಕೆ, ಗ್ರೇಡ್-2 ಕಾರ್ಯದರ್ಶಿಯಾದ ಸರೇಂದ್ರ ಇ, ಸಿಸ್ಟರ್ ಜಾಯ್ಸ್ ಫಾದರ್ ಪತ್ರಾವೋ ಆಸ್ಪತ್ರೆ, ಸಂತ ಫಿಲೋಮಿನಾ ಕಾಲೇಜು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಪ್ರತಿಭಾ, ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಭಾಷಣವನ್ನು ಕೃಷ್ಣ ನೆರವೇರಿಸಿದರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಆರೋಗ್ಯ ಕುರಿತು ಜಾಗೃತಿ ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿ ಪರಿಚಯವನ್ನು ಉಪೇಂದ್ರ ರವರು ಮಾಡಿದರು , ತಾಬಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನು ಲಿಖಿತ್ ರವರು ಸಲ್ಲಿಸಿದರು.