"ವಿದ್ಯಾರ್ಥಿಗಳ ಮೇಲೆ ಭೀಕರ ಲಾಠಿಚಾರ್ಜ್: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಲಿ - ದೆಹಲಿ ಅಮಾನವೀಯ ಘಟನೆ ಖಂಡಿಸಿ ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಆಕ್ರೋಶ"
ಅಹಿಂಸಾತ್ಮಕ ಹೋರಾಟಕ್ಕೆ ದಮನಕಾರಿ ನೀತಿ ಹಾಗೂ ಮುಚ್ಚುಮರೆ ನಡೆ ನೀಟ್ (NEET) ಪರೀಕ್ಷೆಯ ಬೃಹತ್ ಅಕ್ರಮ ಹಾಗೂ ಹಗರಣದ ವಿರುದ್ಧ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರು ಕಳೆದ 25 ದಿನಗಳಿಂದ ಸತತವಾಗಿ ಆಹಾರ/ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಈ ಸತ್ಯಾಗ್ರಹದ ಮಧ್ಯದಿಂದ ದೆಹಲಿ ಪೊಲೀಸ್ ಹೈಕೋರ್ಟ್ ಆದೇಶದಿಂದ ಅವರನ್ನು ಬಟ್ಟೆ ಮುಚ್ಚಿ. ಪ್ರತಿಭಟನೆ ಮಧ್ಯದಿಂದ ಕೇವಲ 30 ನಿಮಿಷದಲ್ಲಿ ಸೋನಂ ವಾಂಗ್ಚುಕ್ವರನ್ನು ಕರೆದುಕೊಂಡು ಹೋಗಿರುತ್ತಾರೆ ಅಲ್ಲದೇ ಅವರ ಪತ್ನಿಗೆ ಸಹ ಅವರೊಂದಿಗೆ ಮಾತನಾಡಲು ಪೊಲೀಸರು ಅವಕಾಶ ನೀಡದಿರುವುದು ಸರ್ಕಾರದ ಅತ್ಯಂತ ದೊಡ್ಡ ಮಟ್ಟದ ಅಮಾನವೀಯ ನಡೆಯಾಗಿದೆ.
ಪೊಲೀಸರ ಲಾಠಿಚಾರ್ಜ್ ಹಾಗೂ ದೌರ್ಜನ್ಯದಿಂದ 150ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ತೀವ್ರ ಗಾಯಗಳಾಗಿವೆ. ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಹೀಗೆ ಸತ್ಯಾಗ್ರಹಿಗಳನ್ನು ರಹಸ್ಯವಾಗಿ ಕರೆದುಕೊಂಡು ಹೋಗಿರುವುದನ್ನು ಗಮನಿಸಿದರೆ ಇದರ ಹಿಂದೆ ಕೇಂದ್ರ ಸರ್ಕಾರದ ಯಾವುದೋ ಅಪಾಯಕಾರಿ ಹಾಗೂ ಗುಪ್ತಕರವಾದ ಆಲೋಚನೆ ಇದೆಯೇ? ಎಂಬುವ ಸಂಸ್ಥೆಯ ಮೂಡುತಿದೆ ಎಂದು ಕಾಂಗ್ರೆಸ್ ನಾಯಕ ಗೋಳಿಕಟ್ಟೆ ಅವರು ನೇರವಾಗಿ ಪ್ರಶ್ನಿಸಿದ್ದಾರೆ.
2. ಅಹಿಂಸೆಯಿಂದ ಸಿಕ್ಕ ಸ್ವಾತಂತ್ರ್ಯ ಮತ್ತು ಪ್ರತಿಭಟನೆಯ ಹಕ್ಕು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟೊಂದು ಅನ್ಯಾಯ ಮತ್ತು ಅಕ್ರಮಗಳು ನಡೆಯಕೂಡದು. ದೇಶದ ಪ್ರಜೆಗಳಿಗೆ ಹಾಗೂ ಶೋಷಿತರಿಗೆ ತಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಪೂರ್ಣ ಅವಕಾಶವನ್ನು ನೀಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಅಪೇಕ್ಷೆಯಾಗಿದೆ. ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಕೇಂದ್ರ ಸರ್ಕಾರ ಪೊಲೀಸರ ಲಾಟಿಗೆ ಮೊಳೆ ಹಾಕಿ ವಿದ್ಯಾರ್ಥಿ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ.
"ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಹಿಂಸೆಯಿಂದಲ್ಲ, ಅಹಿಂಸಾತ್ಮಕ ಹೋರಾಟ ಮತ್ತು ಪ್ರತಿಭಟನೆಯಿಂದ ಎಂಬ ಸತ್ಯವನ್ನು ಕೇಂದ್ರ ಸರ್ಕಾರದ ಆಡಳಿತಗಾರರು ಸಂಪೂರ್ಣವಾಗಿ ಮರೆತಿದ್ದಾರೆ!" ಎಂದು ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
3. ಭ್ರಷ್ಟಾಚಾರದ ರಕ್ಷಣೆ ಮತ್ತು ನೈತಿಕ ಹೊಣೆ
ನೀಟ್ ಪರೀಕ್ಷೆಯ ಬೃಹತ್ ಹಗರಣ ಜರುಗಿದ್ದರೂ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಂತಿರುವುದು ನಾಚಿಕೆಗೇಡು. ದೇಶದ ಇತಿಹಾಸದಲ್ಲೇ ಪ್ರಮುಖ ನಾಯಕರು ಸಣ್ಣ ಆರೋಪ ಬಂದಾಗಲೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಉದಾಹರಣೆಗಳಿವೆ (1962ರಲ್ಲಿ ವಿ. ಕೆ. ಕೃಷ್ಣಮೇನನ್, 1996ರಲ್ಲಿ ಎಲ್. ಕೆ. ಅಡ್ವಾಣಿ, 2005ರಲ್ಲಿ ಕೆ. ನಟವರ್ ಸಿಂಗ್, 2010ರಲ್ಲಿ ಎ. ರಾಜಾ ಹಾಗೂ ಸುರೇಶ್ ಕಲ್ಮಾಡಿ, 2018ರಲ್ಲಿ ಎಂ. ಜೆ. ಅಕ್ಬರ್). ಇಷ್ಟೆಲ್ಲಾ ನಾಯಕರು ರಾಜೀನಾಮೆ ಕೊಟ್ಟಿರುವಾಗ, ಇಂದು ನೀಟ್ ಹಗರಣದ ಮುಖ್ಯ ಹೊಣೆ ಹೊರಬೇಕಾದ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಖಂಡಿಸಿದ್ದಾರೆ.
4. ದೇಶಕ್ಕೆ ಬೇಕು ಶಾಂತಿ ಮತ್ತು ಅಭಿವೃದ್ಧಿ
ಯಾವುದೇ ಜನಪರ ಪ್ರತಿಭಟನೆಗಳು ನಡೆದರೂ ಯಾರನ್ನೂ ಕೇರ್ ಮಾಡದೆ ಲಾಠಿ ಬೀಸುವುದು ಮತ್ತು ಕೋಮುವಾದಿ ತಂತ್ರಗಳ ಮೂಲಕ ರಾಜಕೀಯ ಮಾಡುವುದು ಸರ್ಕಾರದ ನಿತ್ಯ ಕಾಯಕವಾಗಿದೆ. ಇನ್ನು ಮುಂದೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ದೇಶದಲ್ಲಿ ಶಾಂತಿ ನೆಲೆಸಬೇಕು ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ನೈಜ ಅಭಿವೃದ್ಧಿಯಾಗಬೇಕು. ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡದಿದ್ದರೆ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.