ಮಾತು ಕಡಿಮೆ, ಸಾಧನೆ ಹೆಚ್ಚು: ಇತಿಹಾಸ ಬರೆದ ಪುತ್ತೂರಿನ ಜನಪ್ರಿಯ ಶಾಸಕ ಶ್ರೀ ಅಶೋಕ್ ಕುಮಾರ್ ರೈ: ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ
ಸರ್ವಧರ್ಮ ಸಮನ್ವಯದ ನಾಯಕ
ಶಾಸಕ ಅಶೋಕ್ ಕುಮಾರ್ ರೈ ಅವರು ಎಲ್ಲಾ ಧರ್ಮದವರನ್ನು ಒಂದೇ ಕಣ್ಣಿನಿಂದ ಸಮಾನವಾಗಿ ಕಾಣುವ ಅಪ್ರತಿಮ ಜಾತ್ಯತೀತ ನಾಯಕರಾಗಿದ್ದಾರೆ. ಕ್ಷೇತ್ರದಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡುವುದೇ ಅವರ ಪ್ರಮುಖ ಧ್ಯೇಯವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ತಾರತಮ್ಯವಿಲ್ಲದೆ ನ್ಯಾಯ ಒದಗಿಸುತ್ತಿದ್ದಾರೆ. ಇತ್ತೀಚೆಗೆ ಪುರಸರಕಟ್ಟೆಯಲ್ಲಿ ನಡೆದ ಸಣ್ಣ ಘಟನೆಯೊಂದನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದವರು ಕೋಮು ದ್ವೇಷ ಹರಡಲು ಮತ್ತು ಸುಳ್ಳು ದೂರು ದಾಖಲಿಸಲು ಕುತಂತ್ರ ನಡೆಸಿದಾಗ, ಶಾಸಕರು ತಕ್ಷಣವೇ ಎರಡೂ ಕುಟುಂಬಗಳನ್ನು ಭೇಟಿ ಮಾಡಿ ಸತ್ಯಾಸತ್ಯತೆಯನ್ನು ಅರಿತು, ಸಾಂತ್ವನ ಹೇಳುವ ಮೂಲಕ ಸೌಹಾರ್ದತೆಯನ್ನು ಎತ್ತಿಹಿಡಿದಿದ್ದಾರೆ.
ಶಿಕ್ಷಣ ಮತ್ತು ವಸತಿ ಕ್ಷೇತ್ರದಲ್ಲಿ ಐತಿಹಾಸಿಕ ಕ್ರಾಂತಿ
ಇವತ್ತಿನವರೆಗೆ ಯಾವುದೇ ಶಾಸಕರು ಮಾಡದಂತಹ ಅಸಾಧಾರಣ ಮತ್ತು ವಿಶೇಷ ಕೆಲಸಗಳನ್ನು ಶ್ರೀ ಅಶೋಕ್ ಕುಮಾರ್ ರೈ ಅವರು ದಿನನಿತ್ಯವೂ ಮಾಡುತ್ತಿದ್ದಾರೆ:
ಪ್ರತಿ ಗ್ರಾಮಕ್ಕೂ ಕೆ.ಪಿ.ಎಸ್ ಶಾಲೆ: ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಒಂದೊಂದು ಕರ್ನಾಟಕ ಪಬ್ಲಿಕ್ ಶಾಲೆ (KPS) ಮಂಜೂರು ಮಾಡುವಂತೆ ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಮನವಿ ಸಲ್ಲಿಸಿ, ಯೋಜನೆ ಜಾರಿಗೆ ನಿರಂತರ ಶ್ರಮಿಸುತ್ತಿದ್ದಾರೆ.
ಪ್ರತಿಯೊಬ್ಬರಿಗೂ ಸ್ವಂತ ಮನೆ: ಕ್ಷೇತ್ರದಲ್ಲಿ ವಸತಿಹೀನರಾಗಿರುವ ಪ್ರತಿಯೊಬ್ಬರಿಗೂ ಸೂರೆ ಒದಗಿಸಬೇಕೆಂಬ ಸಂಕಲ್ಪ ತೊಟ್ಟಿರುವ ಶಾಸಕರು, ನಿರಂತರವಾಗಿ ಅರ್ಜಿಗಳನ್ನು ಸ್ವೀಕರಿಸಿ ಅರ್ಹರೆಲ್ಲರಿಗೂ ಮನೆ ಹಾಗೂ ನಿವೇಶನಗಳನ್ನು ಹಂಚಿಕೆ ಮಾಡುವ ಮಹತ್ತರ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಐತಿಹಾಸಿಕ ಕೊಡುಗೆ: ಸುಸಜ್ಜಿತ ಪಕ್ಷದ ಕಚೇರಿ ನಿರ್ಮಾಣ
ಪುತ್ತೂರಿನಲ್ಲಿ ಎಲ್ಲಾ ಕಾರ್ಯಕರ್ತರಿಗೆ ನೆರಳಾಗಬಲ್ಲ ಮತ್ತು ಶಕ್ತಿಯಾಗಬಲ್ಲ ಒಂದು ಸ್ವಂತ ಪಕ್ಷದ ಕಚೇರಿ ಇರಬೇಕು ಎಂಬುದು ದಶಕಗಳ ಕನಸಾಗಿತ್ತು. ಇಷ್ಟು ವರ್ಷಗಳಲ್ಲಿ ಯಾವುದೇ ಶಾಸಕರು ಮಾಡಲಾಗದ ಈ ದೊಡ್ಡ ಸಾಹಸಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಮುಂಚೂಣಿಯಲ್ಲಿ ನಿಂತು ಚಾಲನೆ ನೀಡಿದ್ದಾರೆ. ಅವರ ಪೂರ್ಣ ಸಹಕಾರ ಮತ್ತು ನಾಯಕತ್ವದಲ್ಲಿ ಇಂದು ಪುತ್ತೂರಿನಲ್ಲಿ ಪಕ್ಷಕ್ಕೊಂದು ಅತ್ಯಂತ ಸುಂದರ ಹಾಗೂ ಸುಸಜ್ಜಿತ ಕಚೇರಿ ನಿರ್ಮಾಣಗೊಳ್ಳುತ್ತಿದ್ದು, ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ಸಾಗುತ್ತಿವೆ. ಇದು ಕಾರ್ಯಕರ್ತರ ಬಲವನ್ನು ಇಮ್ಮಡಿಗೊಳಿಸಿದೆ.
ಪಕ್ಷಾತೀತ ಜನಸೇವೆ ಹಾಗೂ ಜಿಲ್ಲೆಯ ಶಕ್ತಿ
ವಿಶೇಷವಾಗಿ ಪ್ರತಿ ಸೋಮವಾರ ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಶಾಸಕರ ಕಚೇರಿಯಲ್ಲಿ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ರೈ ಅವರು, ಬಂದ ಜನರಿಗೆ ಧನಸಹಾಯ, ಉದ್ಯೋಗಾವಕಾಶ ಹಾಗೂ ಇಲಾಖಾ ಮಟ್ಟದ ಕೆಲಸಗಳನ್ನು ತಕ್ಷಣವೇ ಮಾಡಿಕೊಡುತ್ತಿದ್ದಾರೆ. ಕೇವಲ ಆದೇಶ ಮಾಡುವುದಷ್ಟೇ ಅಲ್ಲದೆ, ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸುವ ಅವರ ಬದ್ಧತೆ ಅನನ್ಯವಾಗಿದೆ.
ಅಶೋಕ್ ಕುಮಾರ್ ರೈ ಅವರ ಈ ಅಪ್ರತಿಮ ಸಾಧನೆ ಮತ್ತು ಅಭಿವೃದ್ಧಿಪರ ರಾಜಕಾರಣದಿಂದಾಗಿ ವಿರೋಧ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಕನಿಷ್ಠ ಸ್ಪರ್ಧಿಸಲು ಅಭ್ಯರ್ಥಿಗಳೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಪುತ್ತೂರು ಕ್ಷೇತ್ರ ಮಾತ್ರವಲ್ಲದೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಒಬ್ಬ ಆಪದ್ಬಾಂಧವ ಶಕ್ತಿಯಾಗಿ ಬೆಳೆದು ನಿಂತಿರುವ ಇಂತಹ ಶಾಸಕರು ಪುತ್ತೂರಿಗೆ ಸಿಕ್ಕಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಅದೃಷ್ಟ ಎಂದು ಪ್ರಜ್ಞಾವಂತ ಸಾರ್ವಜನಿಕರು ಆಶಿಸಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.