ಗೌರಿತಾಳಿಂದ ಯೋಗ ದಲ್ಲಿ ಹದಿನೈದನೇ ದಾಖಲೆ
ಮಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಾಕಿ ಬುಕ್ ಆಫ್ ರೆಕಾರ್ಡ್ಸ್ ಆಯೋಜಿಸಿದ್ದ ಯೋಗ ಚಾಲೆಂಜಸ್ ಎಲೈಟ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿನಿ ಗೌರಿ ತಾ.ಕೆ.ಜಿ. ಮತ್ತೊಂದು ಅಪೂರ್ವ ಸಾಧನೆ ಮಾಡಿದ್ದು, ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ 15ನೇ ದಾಖಲೆಯನ್ನು ಯಶಸ್ವಿಯಾಗಿ ಬರೆದಿದ್ದಾಳೆ.
ಸ್ಪರ್ಧೆಯಲ್ಲಿ ವೃಕ್ಷಾಸನದಲ್ಲಿ ಕನಿಷ್ಠ 12 ನಿಮಿಷಗಳ ಕಾಲ ನಿಲ್ಲುವ ನಿಯಮವಿದ್ದರೂ, ಗೌರಿ 16 ನಿಮಿಷ 51 ಸೆಕೆಂಡುಗಳ ಕಾಲ ಸಮತೋಲನ ಕಾಪಾಡುವ ಮೂಲಕ ಅತ್ಯುತ್ತಮ ಸಾಧನೆ ಪ್ರದರ್ಶಿಸಿದಳು. ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ಆಕೆಗೆ "ಗೋಲ್ಡನ್ ಸ್ಟಾರ್ ಐಕಾನ್ 2026" ಬಿರುದನ್ನು ಪ್ರದಾನ ಮಾಡಲಾಗಿದೆ.
ಗೌರಿ, ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರ ಶಿಷ್ಯೆಯಾಗಿದ್ದು, ತನ್ನ ನಿರಂತರ ಅಭ್ಯಾಸ ಮತ್ತು ಶಿಸ್ತುಬದ್ಧ ತರಬೇತಿಯಿಂದ ಈ ಸಾಧನೆ ಸಾಧ್ಯವಾಗಿದೆ.
ಈಕೆ ಡಾ. ಗೌತಮ್ ಕೆ.ವಿ. ಹಾಗೂ ಡಾ. ರಾಜೇಶ್ವರಿ ಎಂ.ಎಂ. ಅವರ ಪುತ್ರಿಯಾಗಿದ್ದು, ಕುಟುಂಬದ ಪ್ರೋತ್ಸಾಹ ಮಾರ್ಗದರ್ಶನದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಿದ್ದು, ಈ ಹೊಸ ದಾಖಲೆಯು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ.