ಡಾ. ಅಲ್ಲಾಭಕ್ ಕೊಟ್ನಾಳರವರು ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು: ಭಾರತೀಯ ಉದ್ಯೋಗ ವ್ಯಾಪಾರ ಮಂಡಳಿ ದೆಹಲಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಭಾರತೀಯ ಕಿಸಾನ ಸಂಘ ಬಾನುನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಮಾಜಿ ಸದಸ್ಯರಾದ ಡಾ. ಅಲ್ಲಾಭಕ್ಷ.ಡಿ.ಕೊಟ್ನಾಳ ಇವರಿಗೆ ಪ್ರತಿಷ್ಠಿತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ಲಭಿಸಿದೆ. ಶ್ರೀ ಸಿದ್ಧರಾಮೇಶ್ವರ ಆಗೋ ಕೇಂದ್ರ ಬೆಳಗಾವಿ 32ನೇ ವರ್ಷದ ಪದಾರ್ಪಣೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಶ್ರೀಮತಿ ರತ್ನಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ ಬೆಳಗಾವಿ ಶ್ರೀಮತಿ ಸರೋಜಿನಿ ಮತ್ತು ಶ್ರೀ ಮಹಾಲಿಂಗಪ್ಪ ನಂದಗಾವಿ ಫೌಂಡೇಶನ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಮತ್ತು ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡರು ಮಾಜಿ ಪ್ರಧಾನಮಂತ್ರಿಗಳಾದ 94ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಬೆಂಗಳೂರು ನಗರದಲ್ಲಿ ರೈತರಿಗೆ ಕೃಷಿ ವ್ಯಾಪಾರಿಗಳಿಗೆ ಮತ್ತು ಸಮಾಜ ಸೇವಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ದಿನಾಂಕ 05-08-2026 ಬುಧವಾರ ನಯನ ಸಭಾಂಗಣ ಬೆಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಡಾ.ಅಲ್ಲಾಭಕ್ಷ ಕೊಟ್ನಾಳ ಇವರ ಕೃಷಿ ಬೀಜ ಸಂಸ್ಕರಣೆ, ಕ್ರೀಡೆ, ಶೈಕ್ಷಣಿಕ ಮತ್ತು ಕಳೆದ 30 ವರ್ಷಗಳ ಸಮಾಜ ಸೇವೆಯನ್ನು ಪರಿಗಣಿಸಿ ಇವರಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ ಲಭಿಸಿದೆ. ಸಮಾರಂಭದಲ್ಲಿ ದಿವ್ಯ ಸಾನಿಧ್ಯ ಶ್ರೀ ಶ್ರೀ ಜಗದ್ಗುರು ನಿರ್ಮಲಾನಂದ ಸ್ವಾಮೀಜಿಗಳು ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠ ಬೆಂಗಳೂರು, ಅಧ್ಯಕ್ಷತೆ ಶ್ರೀ ಎಚ್ ಡಿ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಹಾಗೂ ಸಚಿವರು, ಶ್ರೀ ಅಶ್ವತ ನಾರಾಯಣ ಶಾಸಕರು ಬೆಂಗಳೂರು, ಶ್ರೀ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷರು ಯುವ ಘಟಕ ಜೆ.ಡಿ.ಎಸ್ ಬೆಂಗಳೂರು, ಇವರುಗಳು ಈ ಸಮಾರಂಭದಲ್ಲಿ ಭಾಗವಹಿಸಲ್ಲಿದಾರೆ.
ಸ್ವತಹ ಕೃಷಿಕರು ಕೃಷಿ ಉದ್ಯಮಿಗಳು ಬೀಜ ಸಂಸ್ಕರಣೆ ಘಟಕ ಹೊಂದಿರುವ ಶ್ರೀಯುತರು ಕೃಷಿ ಪದವೀಧರರಾಗಿದ್ದು ರೈತಪರ ಕಾಳಜಿ ಉಳ್ಳವರಾಗಿದ್ದಾರೆ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ ನವದೆಹಲಿ ಅಪೇಡ ಮತ್ತು ಫ್.ಸಿ.ಆಯ್ ದ ಸದಸ್ಯರಾಗಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದು ಅಂತರಾಷ್ಟ್ರೀಯ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ