ರಾಜ್ಯ ನೂತನ ಸಚಿವ ಸಂಪುಟದ ಖಾತೆಗಳ ಹಂಚಿಕೆ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಹಣಕಾಸು, ಪರಮೇಶ್ವರ್‌ಗೆ ಕಂದಾಯ, ಪ್ರಿಯಾಂಕ್ ಖರ್ಗೆಗೆ ಗೃಹ ಖಾತೆ, UTK ಗೆ ಆರೋಗ್ಯ ಸೇರಿದಂತೆ ಹಂಚಿಕೆ
ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಸಚಿವರಿಗೆ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಸಂಪುಟದ 14 ಪ್ರಮುಖ ಸಚಿವರ ಖಾತೆಗಳ ಪಟ್ಟಿ ಬಿಡುಗಡೆಯಾಗಿದ್ದು, ಹಿರಿಯ ಮತ್ತು ಯುವ ನಾಯಕರಿಗೆ ಪ್ರಮುಖ ಜವಾಬ್ದಾರಿಗಳನ್ನು ಸಮತೋಲನದಿಂದ ಹಂಚಿಕೆ ಮಾಡಲಾಗಿರುವುದು ಕಂಡುಬಂದಿದೆ.
ಈ ಕುರಿತು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಅಧಿಕೃತ ಜ್ಞಾಪನಾ ಪತ್ರಕ್ಕೆ ಸಹಿ ಹಾಕಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಅಧಿಕೃತ ಅಧಿಸೂಚನೆಯ ಮೂಲ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಮುಂದಿನ ಕ್ರಮಕ್ಕಾಗಿ ರವಾನಿಸಿದ್ದಾರೆ.
ಯಾವ ಸಚಿವರಿಗೆ ಯಾವ ಖಾತೆ ಒಲಿದಿದೆ ಎಂಬುದರ ಸಮಗ್ರ ವರದಿ ಇಲ್ಲಿದೆ:
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಖಾತೆಗಳು:
| ಕ್ರ.ಸಂ. | ಸಚಿವರ ಹೆಸರು | ನಿಯೋಜಿಸಲಾದ ಖಾತೆಗಳು |
| 1 | ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ) | ಹಣಕಾಸು, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR), ಗುಪ್ತಚರ ಇಲಾಖೆ ಹಾಗೂ ಯಾವುದೇ ಸಚಿವರಿಗೆ ಹಂಚಿಕೆಯಾಗದ ಇತರ ಎಲ್ಲಾ ಖಾತೆಗಳು. |
| 2 | ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿ) | ಕಂದಾಯ ಮತ್ತು ಕ್ರೀಡಾ ಇಲಾಖೆ. |
| 3 | ಕೆ.ಎಚ್. ಮುನಿಯಪ್ಪ (ಕ್ಯಾಬಿನೆಟ್ ಸಚಿವರು) | ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ. |
| 4 | ಕೆ.ಜೆ. ಜಾರ್ಜ್ (ಕ್ಯಾಬಿನೆಟ್ ಸಚಿವರು) | ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ. |
| 5 | ಎಂ.ಬಿ. ಪಾಟೀಲ್ (ಕ್ಯಾಬಿನೆಟ್ ಸಚಿವರು) | ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ. |
| 6 | ರಾಮಲಿಂಗಾರೆಡ್ಡಿ (ಕ್ಯಾಬಿನೆಟ್ ಸಚಿವರು) | ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ. |
| 7 | ಸತೀಶ್ ಜಾರಕಿಹೊಳಿ (ಕ್ಯಾಬಿನೆಟ್ ಸಚಿವರು) | ಲೋಕೋಪಯೋಗಿ ಇಲಾಖೆ (PWD). |
| 8 | ಕೃಷ್ಣ ಬೈರೇಗೌಡ (ಕ್ಯಾಬಿನೆಟ್ ಸಚಿವರು) | ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA), ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ನಗರ ಪಾಲಿಕೆಗಳು, BWSSB ಹಾಗೂ BMRCL ಸೇರಿದಂತೆ ಸಮಗ್ರ ಬೆಂಗಳೂರು ಅಭಿವೃದ್ಧಿ. |
| 9 | ಪ್ರಿಯಾಂಕ್ ಖರ್ಗೆ (ಕ್ಯಾಬಿನೆಟ್ ಸಚಿವರು) | ಗೃಹ ಇಲಾಖೆ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ (IT & BT) ಮತ್ತು ಇ-ಆಡಳಿತ (E-Governance). |
| 10 | ಯು.ಟಿ. ಖಾದರ್ (ಕ್ಯಾಬಿನೆಟ್ ಸಚಿವರು) | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. |
| 11 | ಈಶ್ವರ್ ಖಂಡ್ರೆ (ಕ್ಯಾಬಿನೆಟ್ ಸಚಿವರು) | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. |
| 12 | ಡಾ. ಯತೀಂದ್ರ ಸಿದ್ದರಾಮಯ್ಯ (ಕ್ಯಾಬಿನೆಟ್ ಸಚಿವರು) | ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, KUIDFC, ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ (BDA, BMRDA, GBA ಹೊರತುಪಡಿಸಿ). |
| 13 | ಬೈರತಿ ಸುರೇಶ್ (ಕ್ಯಾಬಿನೆಟ್ ಸಚಿವರು) | ಸಾರಿಗೆ ಇಲಾಖೆ. |
| 14 | ಡಾ. ಶರಣಪ್ರಕಾಶ್ ಪಾಟೀಲ್ (ಕ್ಯಾಬಿನೆಟ್ ಸಚಿವರು) | ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ. |