ಮಂಗಳೂರು CEN ಪ್ರಕರಣ: 1, 2, 3 ಮತ್ತು 5ನೇ ಆರೋಪಿಗಳಿಗೆ ಜಾಮೀನು ಮಂಜೂರು


ಮಂಗಳೂರು: ನಗರದ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 2026ರ FIR ನಂ. 0002 ಪ್ರಕರಣದಲ್ಲಿ ಆರೋಪಿಗಳಾದ 1, 2, 3 ಹಾಗೂ 5ನೇ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

▫️▪️ಈ ಪ್ರಕರಣವು ಇನ್ಫರ್ಮೇಶನ್ ಟೆಕ್ನಾಲಜಿ ಕಾಯ್ದೆ (ಸೆಕ್ಷನ್ 66, 66(D)) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4), 308(5), R/W 3(5) ಅಡಿಯಲ್ಲಿ ದಾಖಲಾಗಿತ್ತು. ಪ್ರಕರಣವು ಜೆಎಂಎಫ್‌ಸಿ VII ನ್ಯಾಯಾಲಯ, ಮಂಗಳೂರು ಮುಂದೆ ವಿಚಾರಣೆಗೆ ಬಂದಿತ್ತು.

▫️ಆರೋಪಿಗಳ ಪರವಾಗಿ ವಕೀಲರಾದ ಉಮರುಲ್ ಫಾರೂಕ್ ನೆಲ್ಯಾಡಿ ಅವರು ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ, ಜೈಲಿನಿಂದ ಬಿಡುಗಡೆಗೊಳಿಸಲು ಆದೇಶಿಸಿದೆ.
Next Post Previous Post