ಡಿ.ಕೆ. ಎಸ್. ಸಿ ಯು.ಎ.ಇ 2026 - 27 ನೇ ಸಾಲಿನ ಅಧ್ಯಕ್ಷರಾಗಿ ಸಯ್ಯದ್ ತ್ವಾಹ ಬಾಪಕಿ ತಂಗಳ್, ಕಾರ್ಯಾಧ್ಯಕ್ಷರಾಗಿ ಎಂ .ಇ ಸುಲೈಮಾನ್ ಮೂಳೂರು, ಪ್ರಧಾನ ಕಾರ್ಯದರ್ಶಿಯಾಗಿ ಎಸ್ .ಯೂಸುಫ್ ಆರ್ಲಪದವು, ಕೋಶಾಧಿಕಾರಿಯಾಗಿ ಷರೀಫ್ ಬೊಲ್ಮಾರ್ ನೇತೃತ್ವ
ಮಂಗಳೂರು: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದ ಯು.ಎ.ಇ ರಾಷ್ಟ್ರಿಯ ಸಮಿತಿ ಇದರ 27 ನೇ ವಾರ್ಷಿಕ ಮಹಾಸಭೆಯು 2026, 26 ಆದಿತ್ಯವಾರ ಮದ್ಯಾಹ್ನ 1 ಘಂಟೆಗೆ ದುಬೈ ಅಲ್ ನಾದ ಕೆ.ಸಿ.ಎಫ್ ಸಭಾಂಗಣದಲ್ಲಿ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಸಯ್ಯದ್ ತ್ವಾಹ ಬಾಪಕಿ ತಂಗಳ್ ರವರ ಅದ್ಯಕ್ಷತೆಯಲ್ಲಿ ಮಹಾಸಭೆಗೆ ಸೆಂಟ್ರಲ್ ಕಮಿಟಿಯಿಂದ ವೀಕ್ಷಕರಾಗಿ ಬಂದ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಅಬ್ದುಲ್ ಅಜೀಜ್ ಮೂಳೂರು ರವರ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯು ತ್ವಾಹ ಬಾಪಕಿ ತಂಗಳ್ ರವರ ದುಃವಾ ಹಾಗು ಇಬ್ರಾಹಿಂ ಹಾಜಿ ಕಿನ್ಯ ರವರ ಕಿರಾಹತ್ ನೊಂದಿಗೆ ಪ್ರಾರಂಭ ಗೊಂಡಿತು. ಕಾರ್ಯದರ್ಶಿ ರಿಯಾಜ್ ಮೂಡುತೋಟ ಸ್ವಾಗತ ಭಾಷಣ ಮಾಡಿದರು. ಸಭೆಯ ಉದ್ಘಾಟನೆಯನ್ನು ಹಾಜಿ. ಎಂ . ಇ ಮೂಳೂರು ರವರು ನೆರವೇರಿಸಿದರು.
ಸಂಘಟನಾ ಕಾರ್ಯದರ್ಶಿ ಸಮದ್ ಬಿರಾಲಿ 2025 - 26 ರ ಸಾಲಿನ ಪ್ರವರ್ತನಾ ವರದಿಯನ್ನು ಸವಿಸ್ತಾರವಾಗಿ ಓದಿದರು. ಲೆಕ್ಕಪತ್ರವನ್ನು ಹಣಕಾಸು ಕಾರ್ಯದರ್ಶಿ ಹಾಜಿ ಅಬ್ದುಲ್ಲಾ ಪೆರುವಾಯಿ ಮಂಡಿಸಿದರು. ಲೆಕ್ಕ ಪರಿಶೋದಕರಾದ ಹಸನ್ ಭಾವ ಹಳೆಯಂಗಡಿ ಯವರು ಲೆಕ್ಕ ಪರಿಶೋಧನಾ ಅನುಮೋದಿಸಿದರು.
ಸಮಿತಿ ಅಧ್ಯಕ್ಷರಾದ ಸಯ್ಯದ್ ತ್ವಾಹ ಬಾಪಕಿ ತಂಗಳ್ ರವರು ಅಧ್ಯಕ್ಷ ಭಾಷಣದಲ್ಲಿ ಸಹ ಪ್ರವರ್ತಕರಿಗೆಲ್ಲರಿಗೂ ಕ್ರತಜ್ಞತೆಯನ್ನು ಸಲ್ಲಿಸುತ್ತಾ ಕಮಿಟಿ ಇದರ ಬೆಳವಣಿಗೆ ದ್ರಷ್ಟಿಯಿಂದ ಸಮಯ ಪಾಲನೆ ಹಾಗು ಜವಾಬ್ದಾರಿಯನ್ನು ವಹಿಸಿ ಅದನ್ನು ಸರಿಯಾಗಿ ಪಾಲಿಸಿ ಉತ್ತಮ ರೀತಿಯಲ್ಲಿ ಪ್ರವತಿಸಿ ಸಂಘಟನೆಯ ಬೆಳವಣಿಗೆಗೆ ಸಹಕರಿಸಬೇಕೆಂದು ವಿನಂತಿಸುತ್ತಾ ಕಮಿಟಿ ಯನ್ನು ಬರ್ಖಾಸ್ತು ಗೊಳಿಸಿದರು.
ಮಹಾಸಭೆಗೆ ಸೆಂಟ್ರಲ್ ಕಮಿಟಿಯಿಂದ ವೀಕ್ಷಕರಾಗಿ ಬಂದ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಅಬ್ದುಲ್ ಅಜೀಜ್ ಮೂಳೂರು ರವರು ಸೆಂಟ್ರಲ್ ಕಮಿಟಿ ಗೆ ಡಿ.ಕೆ. ಎಸ್. ಸಿ ಯು.ಎ.ಇ ಇದರ ಕೊಡುಗೆ ಗಳನ್ನು ಹಾಗು ಪ್ರವರ್ತನೆಯನ್ನು ಕೊಂಡಾಡಿದರು. ಸೆಂಟ್ರಲ್ ಕಮಿಟಿ ಇದರ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. 2025 - 26 ರ ಸಾಲಿನ ಕಮಿಟಿ ಪ್ರವರ್ತನೆಗೆ ಅಭಿನಂದಿಸುತ್ತಾ 2026 - 27 ಇದರ ನೂತನ ಸಮಿತಿ ರಚಿಸಲು ಚುನಾವಣಾಧಿಕಾರಿ ಜವಾಬ್ದಾರಿಯನ್ನು ವಹಿಸಿ ನೂತನ ಸಮಿತಿ ಯನ್ನು ಈ ಕೆಳಗಿನಂತೆ ರಚಿಸಲಾಯಿತು
ಅಧ್ಯಕ್ಷರು : ಸಯ್ಯದ್ ತ್ವಾಹ ಬಾಪಕಿ ತಂಗಳ್
ಕಾರ್ಯಾಧ್ಯಕ್ಷರು : ಎಂ .ಇ ಸುಲೈಮಾನ್ ಮೂಳೂರು
ಪ್ರದಾನ ಕಾರ್ಯದರ್ಶಿ : ಎಸ್ .ಯೂಸುಫ್ ಆರ್ಲಪದವು
ಹಣಕಾಸು ಕಾರ್ಯದರ್ಶಿ : ಷರೀಫ್ ಬೊಲ್ಮಾರ್
ಲೆಕ್ಕ ಪರಿಶೋಧಕರು : ಹಾಜಿ ಅಬ್ದುಲ್ಲಾ ಪೆರುವಾಯಿ
ದೇವಲಪಮೆಂಟ್ ಚೆಯರ್ಮೆನ್ : ಹಾಜಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್
ಉಪಾಧ್ಯಕ್ಷರು : ಹಾಜಿ ನವಾಜ್ ಕೋಟೆಕ್ಕಾರ್
ಇಸ್ಮಾಯಿಲ್ ಬಾಬಾ ಮೂಳೂರು
ಕಾರ್ಯದರ್ಶಿ : ಕಮರುದ್ದೀನ್ ಗುರುಪುರ
ರಿಯಾಜ್ ಮೂಡುತೋಟ
ರಿಯಾಜ್ ಕುಳಾಯಿ
ಇಬ್ರಾಹಿಂ ಕಳತ್ತೂರ್
ಲತೀಫ್ ತಿಂಗಳಾಡಿ
ಸಂವಹನ ಕಾರ್ಯದರ್ಶಿ : ಸಮದ್ ಬಿರಾಳಿ , ವಹಾಬ್ ಕಂಚಿಲ್ ಕುಂಜ
ಮುಖ್ಯ ಸಲಹೆಗಾರರು : ಹಾಜಿ ಎಂ. ಇ ಮೂಳೂರು
ಸಲಹೆಗಾರರು : ಹಾಜಿ ಮೊಯಿದಿನ್ ಕುಟ್ಟಿ ಕಕ್ಕಿಂಜೆ
ಇಬ್ರಾಹಿಂ ಹಾಜಿ ಕಿನ್ಯ
ಅಬೂಸ್ವಾಲೀಹ್ ಹಾಜಿ
ಮುಹಮ್ಮದಲಿ ಮೂಡುತೋಟ
ರಜಾಕ್ ಹಾಜಿ ದಿವಾ ಹಾಗು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕೊನೆಯಲ್ಲಿ ರಿಯಾಜ್ ಕುಳಾಯಿ ಧನ್ಯವಾದ ಸಮರ್ಪಣೆಯಂದಿಗೆ ಸ್ವಲಾತ್ ನೊಂದಿಗೆ ಸಭೆ ಮುಕ್ತಾಯ ಗೊಳಿಸಲಾಯಿತು.