2025-26ನೇ ಎಸೆಸೆಲ್ಸಿ ಪರೀಕ್ಷೆ : ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ


ಬೆಂಗಳೂರು: ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ.

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 98.40 ಶೇ. ಫಲಿತಾಂಶ ದಾಖಲಿಸಿದ್ದರೆ, ಉಡುಪಿ ಜಿಲ್ಲೆ 98. ಫಲಿತಾಂಶ ದಾಖಲಿಸುವ ಮೂಲಕ ಮೊದಲ ಎರಡು ಸ್ಥಾನ ಗಳಿಸಿದೆ.. 98.09 ಶೇ. ಫಲಿತಾಂಶ ದಾಖಲಿಸಿದ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in KarnatakaOne Mobile App ಮೂಲಕವೂ ಪಡೆಯಬಹುದು. ಅಲ್ಲದೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಯಪ್/ಎಸ್ಸೆಮ್ಮೆಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ಈ ವರ್ಷ ಪ್ರಥಮ ಬಾರಿ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ನಲ್ಲೂ ಅಪ್ಲೋಡ್ ಮಾಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು https://www.digilocker.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.


ಜಿಲ್ಲಾವಾರು ಸಾಧನೆ: ದಕ್ಷಿಣ ಕನ್ನಡಕ್ಕೆ ಅಗ್ರಸ್ಥಾನ

ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಕರಾವಳಿ ಜಿಲ್ಲೆಗಳು ಅದ್ಭುತ ಸಾಧನೆ ಮಾಡಿದ್ದವು. ಶೇ. 91.12ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಶೇ. 89.96ರೊಂದಿಗೆ ಉಡುಪಿ ದ್ವಿತೀಯ ಹಾಗೂ ಶೇ. 83.19ರೊಂದಿಗೆ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿವೆ. ಶಿವಮೊಗ್ಗ (ಶೇ. 82.29) ಮತ್ತು ಕೊಡಗು (ಶೇ. 82.21) ನಂತರದ ಸ್ಥಾನಗಳಲ್ಲಿವೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆ ಕೇವಲ ಶೇ. 42.43ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.

22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

2025ರ ಫಲಿತಾಂಶದ ಮತ್ತೊಂದು ವಿಶೇಷವೆಂದರೆ, ರಾಜ್ಯದಾದ್ಯಂತ ಒಟ್ಟು 22 ಪ್ರತಿಭಾವಂತ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇವರಲ್ಲಿ ಬೆಳಗಾವಿಯ ರೂಪಾ ಚನ್ನಗೌಡ ಪಾಟೀಲ್, ಉತ್ತರ ಕನ್ನಡದ ಶಗುಫ್ತಾ ಅಂಜುಮ್, ವಿಜಯಪುರದ ಅಖಿಲಾ ಅಹ್ಮದ್ ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳೂ ಇರುವುದು ವಿಶೇಷ. ಶಾಲಾವಾರು ಸಾಧನೆಯನ್ನು ಗಮನಿಸಿದರೆ, ಅನುದಾನರಹಿತ (ಖಾಸಗಿ) ಶಾಲೆಗಳು ಶೇ. 75.59ರಷ್ಟು ಫಲಿತಾಂಶದೊಂದಿಗೆ ಮುಂದಿದ್ದರೆ, ಸರ್ಕಾರಿ ಶಾಲೆಗಳು ಶೇ. 62.7ರಷ್ಟು ಫಲಿತಾಂಶ ದಾಖಲಿಸಿದ್ದವು

ಇನ್ನೂ ಎಲ್ಲರೂ ಚಿತ್ತ 2026ರ ಎಸ್‌ಎಸ್‌ಎಲ್‌ಸಿ ಫಲಿತಾಂಶದತ್ತ ಇದ್ದು, ಯಾವ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲಿದೆ, ಎಷ್ಟು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಂಚಿಕೊಳ್ಳಲಿದ್ದಾರೆ ಎಂದು ಫಲಿತಾಂಶ ಪ್ರಕಟವಾಗುವ ತನಕ ಕಾದು ನೋಡಬೇಕಿದೆ.



Next Post Previous Post