ಮಸೀದಿ ಮದ್ರಸಗಳ ಆಸ್ತಿ ವಿವರಗಳ ಅಪ್ಲೋಡ್ ಮಾಡುವ ಕಾರ್ಯಕ್ರಮಕ್ಕೆ ಪುತ್ತೂರು ಸೀರತ್ ಕಮಿಟಿ ಕಚೇರಿಯಲ್ಲಿ ಚಾಲನೆ
ಪುತ್ತೂರು: ತಾಲೂಕು ಸೀರತ್ ಕಮಿಟಿಯ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಸ್ ಸಂಸ್ಥೆಗಳ ಹಾಗೂ ಅದರ ಆಸ್ತಿ ವಿವರವನ್ನು ದಾಖಲಿಸಿ ಅಪ್ಲೋಡ್ ಮಾಡುವ ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕು ಸೀರತ್ ಕಮಿಟಿಯ ಕಚೇರಿಯಲ್ಲಿ ಸಮಿತಿ ಉಪಾಧ್ಯಕ್ಷ ಬಿ.ಎ.ಶಕೂರ್ ಹಾಜಿ ಕಲ್ಲೆಗ ಇವರ ಅಧ್ಯಕ್ಷ ತೆಯಲ್ಲಿ ಕೋಶಾಧಿಕಾರಿ ಎಲ್ ಟಿ ಅಬ್ದುಲ್ ರಜಾಕ್ ಹಾಜಿ ಪುತ್ತೂರು ಇವರು ಚಾಲನೆ ನೀಡಿದರು.
ಎಲ್ಲಾ ಜಮಾಅತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪುತ್ತೂರು ಅಲ್ಪಸಂಖ್ಯಾತ ಇಲಾಖೆ ಮಾಹಿತಿ ಕೇಂದ್ರದ ಮುಖ್ಯಸ್ಥ ಮುಹಮ್ಮದ್ ರಫೀಕ್ ರವರು ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮ
ಈ ಕಾರ್ಯಕ್ರಮವು ಒಂದು ತಿಂಗಳ ಕಾಲ ಜರಗಲಿದ್ದು ಪ್ರತಿದಿನ ಸೀರತ್ ಕಮಿಟಿ ಕಛೇರಿಯಲ್ಲಿ ಕಚೇರಿ ಸಮಯದಲ್ಲಿ ಪುತ್ತೂರು , ವಿಟ್ಲ ಭಾಗದ ಜಮಾತಿಗೆ ಒಳಪಟ್ಟ ವಕ್ಫ್ ಸಂಸ್ಥೆಗಳ ಮಸೀದಿ, ಮದರಸ ಕಬರ್ ಸ್ಥಾನ ಇತ್ಯಾದಿಗಳ ಆಸ್ತಿಗಳ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುವುದು ಸಂಬಂಧಪಟ್ಟವರು ಸೀರತ್ ಕಮಿಟಿ ಕಚೇರಿಯನ್ನು ಸಂಪರ್ಕಿಸುವಂತೆ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.
ಸೀರತ್ ಕಮಿಟಿಯ ಪದಾಧಿಕಾರಿ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಾಹಿತಿ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಪುತ್ತೂರು ತಾಲೂಕು ಸೀರತ್ ಕಮಿಟಿಯ ಪತ್ರಿಕಾ ಕಾರ್ಯದರ್ಶಿ ಶೇಕ್ ಜೈನುದ್ದೀನ್, ವಿ.ಕೆ.ಶರೀಫ್ ಬಪ್ಪಳಿಗೆ, ಆರ್.ಪಿ. ಅಬ್ದುಲ್ ರಜಾಕ್ ಪಡೀಲ್ , ಅಬ್ದುಲ್ ಹಮೀದ್ ಸಾಲ್ಮರ, ಬಶೀರ್ ಕೌಡಿಚ್ಚಾರ್ ಮೊದಲಾದವರು ಉಪಸ್ಥಿತರಿದ್ದರು.